Saturday, June 21, 2008

ಆರಂಭಕ್ಕೆಮುನ್ನ...

ನಮ್ಮ ರಾಜ್ಯದ ಬಗ್ಗೆ ನಮಗೇನು ಗೊತ್ತು?
ಇಲ್ಲಿನ ಸಮಸ್ಯೆಗಳ ಬಗ್ಗೆ ಏನು ಗೊತ್ತು?
ವಿವಿಧ ಸಮಸ್ಯೆಗಳ ಪರಿಹಾರಕ್ಕಾಗಿ ರಾಜ್ಯ ವಿವಿಧ ಇಲಾಖೆಗಳ ಮೂಲಕ ಎಷ್ಟು ಖರ್ಚು ಮಾಡುತ್ತಿದೆ, ಮತ್ತು ಅದರ ಪ್ರತಿಫಲ ಏನಾಗಿದೆ ಅನ್ನುವುದರ ಬಗ್ಗೆ ಏನು ಗೊತ್ತು?

ತಿಳಿದುಕೊಳ್ಳಬೇಕೆಂಬ ಕುತೂಹಲವಿರುವವರಿಗಾಗಿ ಈ ಜಾಲತಾಣ.

ತಮಗೆ ಗೊತ್ತಿರುವ ವಿಚಾರಗಳನ್ನು ಇಲ್ಲಿ ಹಂಚಿಕೊಳ್ಳುವ ಮತ್ತು ಇದರಲ್ಲಿ ಭಾಗವಹಿಸುವ ಆಸಕ್ತಿಯಿರುವವರಿಗೂ ಇಲ್ಲಿ ಸುಸ್ವಾಗತ.

1) ರಾಜ್ಯದ ಎಲ್ಲಾ ಮಂತ್ರಿಗಳ ಮತ್ತು ಖಾತೆಗಳ ಕುರಿತ ವಿವರ - ವಿವಿಧ ಬೆಳವಣಿಗೆಗಳ ಕುರಿತ ಚರ್ಚೆಗಳು
2) ಪ್ರತಿಯೊಬ್ಬ ಶಾಸಕರ ಕುರಿತ ಮತ್ತು ಅವರ ಕ್ಷೇತ್ರಗಳ ಕುರಿತ ಮಾಹಿತಿ - ಅಲ್ಲಿನ ಸಮಸ್ಯೆಗಳ ಕುರಿತ ಚರ್ಚೆಗಳು

ಇಲ್ಲಿ ನಿಮಗೆ ಮುಖ್ಯವಾಗಿ ಸಿಗಲಿವೆ.

ಬನ್ನಿ, ಭಾಗವಹಿಸಿ.

5 comments:

shankar said...

ಇದು ಒಂದು ರೀತಿಯ ಒಳ್ಳೆಯ ಬೆಳವಣಿಗೆ, ನಮ್ಮೆಲ್ಲರ ಈ ಚಿಕ್ಕ ಪ್ರಯತ್ನ ಸಮಾಜದ ಎಲ್ಲ ವರ್ಗದವರ ಬಾಳಿಗೆ ಬೆಳಕು ಚೆಲ್ಲುವಂತಾಗಲಿ.

Jagali bhaagavata said...

ಶ್ಲಾಘನೀಯ ಪ್ರಯತ್ನ. ಮಧ್ಯದಲ್ಲಿ ಕೈಚೆಲ್ಲಿ ಕೂತುಬಿಡ್ಬೇಡಿ ಅಷ್ಟೆ.

Shree said...

ಶಂಕರ್, ಧನ್ಯವಾದ, ಅದು ನಮ್ಮ-ನಿಮ್ಮಂತಹ ಉಳಿದವರ ಸಕ್ರಿಯ ಭಾಗವಹಿಸುವಿಕೆಯಿಂದ ಮಾತ್ರ ಸಾಧ್ಯ. ಟೀಮಾಗಿ ಏನೇನೋ ಮಾಡಿದೀವಂತೆ, ಇದ್ನೂ ಚೆನ್ನಾಗಿ ಮಾಡೋಣ ಬಿಡಿ! :)

ಭಾಗವತ, ಇದು ಕೈಚೆಲ್ಲಿ ಕೂರುವ ಐಡಿಯಾದಲ್ಲಿ ಮಾಡ್ತಿರೋದು ಅಲ್ವೇ ಅಲ್ಲ.. ಆದ್ರೆ ಕೆಲಸ ಬೇಗ ಬೇಗನೆ ನಡೆಯುವಲ್ಲಿ ಸ್ವಲ್ಪ ತೊಂದ್ರೆ ಆಗಿದೆ ಅಷ್ಟೆ. feedback ಇಲ್ಲದೇ ಇದ್ರೆ ಕತ್ಲಲ್ಲಿ ಕೂತು ರೆಡಿ ಮಾಡಿದ ಹಾಗಾಗುತ್ತೆ, ಹಾಗಾಗದ ಹಾಗೆ ನೋಡ್ಕೊಳ್ಳೋದು ನಿಮ್ ಜವಾಬ್ದಾರಿ! :D

Lakshmi Shashidhar Chaitanya said...

ಈ ತರಹದ ಪ್ರಯತ್ನ ನಿಜಕಕ್ಕೂ ಮೆಚ್ಚತಕ್ಕದ್ದೇ, ಪ್ರೋತ್ಸಾಹಿಸಬೇಕಾದ್ದೇ ! ನಾಗರಿಕರಾಗಿ ನಾಎನು ಮಾಡಬಹುದೋ ಅದೆಲ್ಲವನ್ನೂ ಮಾಡೋಣ !

ಕರಣಂ ರಮೇಶ್ said...

ಇದೊಂದು ಉತ್ತಮ ಪ್ರಯತ್ನ. ಕುಸಿಯುತ್ತಿರುವ ರಾಜಕೀಯ ಮೌಲ್ಯಗಳನ್ನು ಉಳಿಸಿಕೊಳ್ಳುವ ಪ್ರಯತ್ನವನ್ನೂ ಸಹ ಇಲ್ಲಿ ಮಾಡಬಹುದಾಗಿದೆ. ಇಂದು ಸಣ್ಣದಾಗಿ ಈ ಕಾರ್ಯ ಖಾಸಗಿಯಾಗಿ ಆರಂಭಗೊಂಡರೆ ಮುಂದಿನ ವರ್ಷಗಳಲ್ಲಿ ಈ ಬಗ್ಗೆ ಬದಲಾವಣೆಗಳನ್ನು ನಿರೀಕ್ಷಿಸಬಹುದೇನೋ. any how it is an good effort. let us all join our hands. all the best.