Sunday, June 29, 2008

ಎಲ್ಲಿಂದ ಶುರು? ಹೇಳಿ...

ಬ್ಲಾಗಿನ ಮಟ್ಟದಲ್ಲಿ ಈ ಕೆಲಸ ಶುರುವೇನೋ ಆಗಿದೆ. ಈಗ ವಿಧಾನಸಭಾಕ್ಷೇತ್ರಗಳ ಮತ್ತು ಶಾಸಕರ ವಿವರದಿಂದ ಕೆಲಸ ಶುರು ಆಗಬೇಕು... ಇಲ್ಲಿ ಭಾಗವಹಿಸುತ್ತಿರುವವರ ಕ್ಷೇತ್ರಗಳಿಂದಲೇ ಆರಂಭಿಸುವ ಐಡಿಯಾ ನನ್ನದು... ಅದು ಸರಿ ಅನ್ಸಿದ್ರೆ ನಿಮ್ ನಿಮ್ಮ ಕ್ಷೇತ್ರಗಳ ಹೆಸರು ಕಮೆಂಟ್ ಆಗಿ ಪೋಸ್ಟ್ ಮಾಡಿ, ಅಲ್ಲಿಂದ್ಲೇ ಕೆಲ್ಸ ಶುರು ಮಾಡೋಣ.
ಮೊದಲಿಗೆ ನಾನು. ನಾನು ಕೇರಳದವಳು, ಹಾಗಾಗಿ ನನ್ನ ಮತದಾನದ ಹಕ್ಕು ಅಲ್ಲಿದೆ. ಆದ್ರೆ ಬೆಂಗಳೂರಿನಲ್ಲಿ ನಾನಿರುವ ಕ್ಷೇತ್ರ ಹೆಬ್ಬಾಳ. ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಇಲ್ಲಿಯ ಶಾಸಕರು. ಸಂಪುಟದಲ್ಲಿದ್ದು ಪ್ರಭಾವಿ ಖಾತೆಗಳನ್ನು ಹೊಂದಿದ್ದಾರೆ.

3 comments:

Lakshmi Shashidhar Chaitanya said...

ನನ್ನ ಕ್ಷೇತ್ರ ಬಸವನಗುಡಿ. ಅಲ್ಲಿಯ ಶಾಸಕರು ರವಿ ಸುಬ್ರಹ್ಮಣ್ಯ ಎನ್ನುವವರು.

ಕರಣಂ ರಮೇಶ್ said...

ನಾನು ತುಮಕೂರಿನವನು. ತುಮಕೂರು ಗ್ರಾಮಾಂತರ ವಿಧಾನಸಭಾ ವ್ಯಾಪ್ತಿಯಲ್ಲಿ ನನ್ನ ಹಳ್ಳಿ ಅರಕೆರೆ ಬರುತ್ತದೆ. ಇದು ಹೊಸ ಕ್ಷೇತ್ರ. ಬಿಜೆಪಿಯ ಬಿ.ಸುರೇಶ್ ಗೌಡ ಪ್ರಥಮ ಶಾಸಕರಾಗಿದ್ದಾರೆ.
ತುಮಕೂರಿನಲ್ಲಿ ಹನ್ನೊಂದು ಕ್ಷೇತ್ರಗಳಿದ್ದು, ತುಮಕೂರು ನಗರ(ಎಸ್.ಶಿವಣ್ಣ - ಬಿಜೆಪಿ), ಗುಬ್ಬಿ (ಎಸ್.ಆರ್.ಶ್ರೀನಿವಾಸ್ - ಜೆಡಿಎಸ್, ಕೊರಟಗೆರೆ (ಡಾ. ಜಿ.ಪರಮೇಶ್ವರ - ಕಾಂಗ್ರೆಸ್ ), ಮಧುಗಿರಿ (ಸಿ.ಗೌರೀಶಂಕರ್ - ಜೆಡಿಎಸ್ ), ಪಾವಗಡ - ವೆಂಕಟರಮಣಪ್ಪ - ಪಕ್ಷೇತರ - ಪ್ರಸ್ತುತ ಸಚಿವ), ಚಿಕ್ಕನಾಯಕನಹಳ್ಳಿ (ಸಿ.ಬಿ.ಸುರೇಶ ಬಾಬು - ಜೆಡಿಎಸ್ ), ತುರುವೇಕೆರೆ (ಜಗ್ಗೇಶ್ - ಕಾಂಗ್ರೆಸ್ ಮಾಜಿ), ತಿಪಟೂರು (ಬಿ.ಸಿ.ನಾಗೇಶ್ - ಬಿಜೆಪಿ), ಕುಣಿಗಲ್ (ಬಿ.ಬಿ.ರಾಮಸ್ವಾಮಿ ಗೌಡ - ಕಾಂಗ್ರೆಸ್ )ಶಿರಾ - (ಟಿ.ಬಿ.ಜಯಚಂದ್ರ - ಕಾಂಗ್ರೆಸ್ ).

shankar said...

ನನ್ನ ಕ್ಷೇತ್ರ ಕಲಘಟಗಿ, ಗಣಿ ಧಣಿ ಎಂತಲೇ ಖ್ಯಾತಿ ಪಡೆದ ಸಂತೋಷ್ ಲಾಡ್ ನಮ್ಮ ಶಾಸಕ, ಇವರು ಮೂಲತಹ ಮಹಾರಾಷ್ಟ್ರದವರು, ವ್ಯಾಪಾರಿ ಉದ್ದೇಶದಿಂದ ಬಳ್ಳಾರಿ ಜಿಲ್ಲೆಯ ಸೊಂಡೂರಿಗೆ ಅವರ ಹಿರಿಯರ ಕಾಲದಲ್ಲಿಯೇ ಬಂದು ನೆಲೆಸಿದ್ದಾರೆ. ಸೊಂಡುರಿನಲ್ಲಿ ಗಣಿ ಉದ್ದಿಮೆ ಹೊಂದಿರುವ ಇವರು, ಕ್ಷೇತ್ರ ಮರುವಿಂಗಡಣೆಯಿಂದ ಧಾರವಾಡ ಜಿಲ್ಲೆಯ ಕಲಘಟಗಿ ಕ್ಷೇತ್ರಕ್ಕೆ ವಲಸೆ ಬಂದು ಕಾಂಗ್ರೆಸ್ ಪಕ್ಷದಿಂದ ಆಯ್ಕೆಯಾಗಿದ್ದಾರೆ.
ಚಿಕ್ಕ ವಯಸಿನಲ್ಲಿ ರಾಜಕೀಯಕ್ಕೆ ಸೇರಿದ ಇವರು ಎರಡನೇ ಬಾರಿಗೆ ವಿಧಾನಸಭೆ ಪ್ರವೇಶಿಸಿದ್ದಾರೆ. ಪಕ್ಷ ರಾಜಕೀಯದಲ್ಲಿ ನಂಬಿಕೆ ಇಡದ ಇವರು, ತಮ್ಮ ಜನಪರ ಕಾಳಜಿಯಿಂದಾಗಿ ಎರಡನೇ ಬಾರಿಗೆ ಆಯ್ಕೆಯಾಗಿದ್ದಾರೆ. ಅಭಿವೃದ್ಧಿ ಕಾರ್ಯಗಳಿಗೆ ಸರ್ಕಾರದ ಹಣ ನೆಚ್ಚದೇ ಸ್ವಂತ ಹಣದಿಂದಲೇ ಕಾರ್ಯ ಮಾಡುತ್ತಿದ್ದಾರೆ. ಈ ಸಾರಿ ಆಯ್ಕೆಯಾಗಿ ಮೊದಲು ಮಾಡಿದ ಕಾರ್ಯ ಕಾಲೇಜು ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ನೀಡಿದ್ದಾರೆ. ರೈತರಿಗೆ ಉಚಿತ ಜೆಸಿಬಿ ನೀಡಿದ್ದಾರೆ. ಹೀಗಾಗಿ ಜನರು ಒಳ್ಳೆಯ ವ್ಯಕ್ತಿ ಎಂಬ ನಂಬಿಕೆ ಇಟ್ಟುಕೊಂಡಿದ್ದಾರೆ. ಯುವಕರ ಬಗ್ಗೆ ಅಪಾರ ಕಾಳಜಿ ಹೊಂದಿರುವ ಇವರು ಸದಾ ಹಸನ್ಮುಖಿ.ಸ್ಲೇಹ ಜೀವಿ.ಅಭಿವೃದ್ಧಿ ಕಾರ್ಯಗಳಿಗೆ ಕಂಕಣ ಬದ್ಧರಾಗಿರುವ ಇವರು ಪ್ರಗತಿಪರ ಚಿಂತಕರು.